ಶೀಲ ವ್ರತ ನೇಮ ನಿತ್ಯವ ಹಿಡಿದು ಬಿಡುವ
ಕಳ್ಳುಗುಡಿಗಳಿರಾ ನೀವು ಕೇಳಿರೊ.
ಹಿಡಿದು ಬಿಡಲಿಕ್ಕೆ ವಿಶ್ವಕರ್ಮನ ಕೈಯ ಇಕ್ಕುಳವೆ ವ್ರತ?
ಬ್ರಹ್ಮಪಿಶಾಚಿಯೆ ಹಿಡಿದು ಬಿಡಲಿಕ್ಕೆ ವ್ರತ?
ರವಿ ಶಶಿಯ ಗ್ರಹಣವೆ ಹಿಡಿದು ಬಿಡಲಿಕ್ಕೆ ವ್ರತ?
ಕಲೆವಿದಿಯೆ ಹಿಡಿದುಬಿಡಲಿಕ್ಕೆ ವ್ರತ?
ಇದಲ್ಲ ನಿಲ್ಲು ನಿಲ್ಲು ಮಾಣು.
ಹಿಡಿಯಬೇಕಾದರೆ ಸರ್ಪ ವೃಶ್ಚಿಕ ಅನಲ
ಅಸಿಯಾದರೆಯು ಹಿಡಿದಹರೆ ಹಿಡಿಯಬೇಕು,
ದೃಢಭಕ್ತಿಯಿದಲ್ಲಾ.
ಕಳ್ಳುಗುಡಿ ಕುಡಿದು ಕುಣಿಕುಣಿದಾಡಿ ಬಿಡುವ ಹಾಗೆ
ಬಿಡುವ ತುಡುಗುಣಿ ಹೊಲೆಯರ ಮುಖವ ನೋಡಬಾರದು
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.