Index   ವಚನ - 71    Search  
 
ಶಿವಭಕ್ತಿರಿಗೆ ಭವಿ ಸರಿಯೆಂಬ ಭ್ರಷ್ಟ ಭಂಡರು ನೀವು ಕೇಳಿರೊ. ಅದೇನು ಕಾರಣವೆಂದರೆ ಕತ್ತೆಗೆ ಕುದುರೆ ಸರಿಯೆ? ಗರತಿಗೆ ತೊತ್ತು ಸರಿಯೆ? ಭಿತ್ತಿಗೆ ಕೇರು ಸರಿಯೆ? ವಿರಕ್ತಿಗೆ ಪಿರಿತಿ ಸರಿಯೆ? ಕತ್ತಲೆಗೆ ಬೆಳಗು ಸರಿಯೆ? ಕರ್ತಗೆ ಭೃತ್ಯ ಸರಿಯೆಂಬ ದುರುಕ್ತಿಯ ದುರಾಚಾರಿ ದೂಷಕ ಹೊಲೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ? ವಿರಕ್ತಿ ವೀರಶೈವ ವಿಚಾರ ಅವನಿಗೆಲ್ಲಿಯದೊ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.