Index   ವಚನ - 75    Search  
 
ತಿಥಿ ಮತಿ [ಹಾಳ] ಮಹಳವ ಮಾಡುವ ಮತಿಗೇಡಿ ಮೂಳಿಗಳು ನೀವು ಕೇಳಿರೊ. ತಿಥಿಯಲ್ಲಿ ತಿಂಬನೆ ನಿಮ್ಮ ದೇವ ? ಮತಿಯಲ್ಲಿ ಉಂಬನೆ ನಿಮ್ಮ ದೇವ ? [ಹಾಳ] ಮಹಳವ ಮಾಡ ಹೇಳುವನೆ ನಿಮ್ಮ ದೇವ? ಗುರುಲಿಂಗಜಂಗಮದ ಪಾದಸೇವೆಯಮಾಡಿ ಬದುಕಿರೊ ಬಲ್ಲವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.