ಆದಿಯ ಅಂಗಮುಖಕ್ಕರ್ಪಿಸಿ,
ಅನಾದಿಯ ಪ್ರಾಣ ಮುಖಕ್ಕರ್ಪಿಸಿ,
ಮನವೆಂಬುದ ಅರಿವಿನ ಮುಖಕ್ಕರ್ಪಿಸಿ,
ತಾನೆಂಬುದ ನಿರಾಕಾರದಲ್ಲಿ ನಿಲಿಸಿ,
ಪರಿಣಾಮಪ್ರಸಾದದಲ್ಲಿ ತದ್ಗತವಾಗಿ,
ಪ್ರಸಾದವೆ ಪ್ರಾಣವಾಗಿ, ಪ್ರಸಾದವೆ ಕಾಯವಾಗಿ,
ಪ್ರಸಾದವೆ ಜ್ಞಾನವಾಗಿ, ಪ್ರಸಾದವೆ ಧ್ಯಾನವಾಗಿ,
ಪ್ರಸಾದವೆ ಲಿಂಗಭೋಗೋಪಭಾಗವಾಗಿಪ್ಪ,
ನಮ್ಮ ಗುಹೇಶ್ವರಲಿಂಗದಲ್ಲಿ ನಿಜಪ್ರಸಾದಿ
ಮರುಳಶಂಕರದೇವರ ನಿಲವ
ನೋಡಾ ಸಂಗನಬಸವಣ್ಣಾ.
Transliteration Ādiya aṅgamukhakkarpisi,
anādiya prāṇa mukhakkarpisi,
manavembuda arivina mukhakkarpisi,
tānembuda nirākāradalli nilisi,
pariṇāmaprasādadalli tadgatavāgi,
prasādave prāṇavāgi, prasādave kāyavāgi,
prasādave jñānavāgi, prasādave dhyānavāgi,
prasādave liṅgabhōgōpabhāgavāgippa,
nam'ma guhēśvaraliṅgadalli nijaprasādi
maruḷaśaṅkaradēvara nilava
nōḍā saṅganabasavaṇṇā.
Hindi Translation आदि का अंगमुख को अर्पित कर ,
अनादि का प्राणमुख को अर्पित कर,
मन कहना ज्ञान मुख को अर्पित कर,
खुद कहना निराकार में खड़ा कर,
परिणाम प्रसाद में तद्गगत होकर,
प्रसाद ही प्राण होकर, प्रसाद ही शरीर होकर,
प्रसाद ही ज्ञान होकर, प्रसाद ही ध्यान होकर,
प्रसाद ही लिंग भोगोपभोग बने,
हमारे गुहेश्वरा लिंग में निज प्रसादी
मरुळशंकरदेव की स्थिति देख संगनबसवण्णा।
Translated by: Eswara Sharma M and Govindarao B N