Index   ವಚನ - 89    Search  
 
ಕಾಳಗದೊಳು ಜೆಡೆದಲೆಗೆ ಮುಡಿದಲೆಯಕೊಟ್ಟ. ಭಾಳಾಂಬಕನ ಪಾದವ ಕಂಡು ಚೋಳರಾಯ, ಏಳುನೂರುಯೆಪ್ಪತ್ತೇಳು ಚಿನ್ನದ ಹರಿವಾಣದಲ್ಲಿ ಮೇಳೈಸಿ ಪಂಚಪಾಯಸ ಪಂಚಕಜ್ಜಾಯ ಪರಿಪರಿ ಪದಾರ್ಥ ಭಕ್ಷ್ಯನ್ನವನೆಡೆ ಮಾಡಿ ಘೃತವ ನೀಡಿ ಕಣ್ಣುತುಂಬಿ ನೋಡಿ ಹಮ್ಮನಾಡಿದರೆ ಅವನ ಜರದು ಮಾದಾರ ಚೆನ್ನಯ್ಯನಲ್ಲಿಗೆ ಹೋಗಿ ಜುರುಜುರುತ ಅಂಬಲಿ ಸೊಂಡಿಲಿಕ್ಕೆನೆ ಸುರುಕು ಸುರುಕು ಸುರುಕೆನೆ ಸುರಿದು ಅಮೃತಕ್ಕೆ ಸರಿಯೆಂದು ಪರಿಶಿವನೊಲಿದುಕೊಂಡಾಡಿದ ಮಾದಾರ ಚೆನ್ನಯ್ಯಂಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.