ಆದಿಯನರಿಯದೆ,
ಅನಾದಿಯಿಂದತ್ತತ್ತ ತಾನಾರೆಂಬುದ
ವಿಚಾರಿಸಿ ತಿಳಿದು ನೋಡದೆ,
ಮಾಡಿದಡೆ ಫಲವೇನಯ್ಯಾ ಬಸವಯ್ಯಾ?
ಸಾವನ್ನಕ್ಕ ಸಾಧನೆಯ ಮಾಡಿದಡೆ,
ಕಾದುವ ದಿನ ಇನ್ನಾವುದಯ್ಯಾ ಬಸವಯ್ಯಾ?
ಬಾಳುವನ್ನಕ್ಕ ಭಜನೆಯ ಮಾಡಿದಡೆ
ತಾನಹ ದಿನ ಇನ್ನಾವುದಯ್ಯಾ ಬಸವಯ್ಯಾ?
ಇದು ಕಾರಣ,
ಮರ್ತ್ಯಲೋಕದ ಭಕ್ತರುಗಳೆಲ್ಲರು, ತಥ್ಯವನರಿಯದೆ,
ಮಿಥ್ಯವನೆ ಹಿಡಿದು ಮಿಥ್ಯವನೆ
ಪೂಜಿಸಿ ವ್ಯರ್ಥರಾಗಿ ಹೋದರು,
ತಮ್ಮ ತಾವರಿಯದೆ ಕೆಟ್ಟರು.
ತಲೆಯ ಕೊಯಿದು ದೇಹವ ಕಡಿದು, ಕಣ್ಣ ಕಳೆದು
ಹೊಟ್ಟೆಯ ಸೀಳಿ, ಮಗನ ಕೊಂದು ಬಾಣಸವ ಮಾಡಿ,
ವಾದಿಗೆ ಪುರಂಗಳನೊಯ್ದು,
ಕಾಯವೆರಸಿ ಕೈಲಾಸಕ್ಕೆ ಹೋದವರೆಲ್ಲರು ಭಕ್ತರಪ್ಪರೆ?
ಅವರಿಗೆ ಶಿವಪಥವು ಸಾಧ್ಯವಾಯಿತ್ತೆ? ಭವ ಹಿಂಗಿತ್ತೆ?
ಅದು ಸಹಜವೆ? ಅಲ್ಲಲ್ಲ ನಿಲ್ಲು ಮಾಣು.
ನರಲೋಕದವರೆಲ್ಲರು ನರಸಂಸಾರಕ್ಕೊಳಗಾದರು,
ಸುರಲೋಕದ ಸುರರುಗಳೆಲ್ಲ ಸುರಸಂಸಾರಕ್ಕೊಳಗಾದರು,
ರುದ್ರಲೋಕದ ರುದ್ರರುಗಳೆಲ್ಲ
ರುದ್ರಸಂಸಾರಕ್ಕೊಳಗಾದರು,
ಮುನಿಜನಂಗಳೆಲ್ಲರು ತಪವೆಂಬ ಸಂಸಾರಕ್ಕೊಳಗಾದರು,
ಜಂಗಮವ ಹಿಡಿದವರೆಲ್ಲರು
ಸಾಯುಜ್ಯವೆಂಬ ಸಂಸಾರಕ್ಕೊಳಗಾದರು,
ಲಿಂಗವ ಹಿಡಿದವರೆಲ್ಲರು ಫಲ-ಪದಗಳೆಂಬ
ಸಂಸಾರಕ್ಕೊಳಗಾದರು,
ಇಂತೀ ಸಂಸಾರಕ್ಕೊಳಗಾದವರೆಲ್ಲ
ಮಾಯೆಯ ಹೊಡೆಗಿಚ್ಚ ಗೆಲಬಲ್ಲರೆ?
ಇದು ಕಾರಣ; ನಿತ್ಯ ನಿಜತತ್ತ್ವ
ತಾನೆಂದರಿಯದೆ, `ತತ್ತ್ವಮಸಿ' ವಾಕ್ಯವ
ಹೊರಹೊರಗನೆ ಬಳಸಿ ಕೆಟ್ಟರಲ್ಲಾ ಹಿರಿಯರು,
ಸತ್ತರಲ್ಲಾ ನಾಯಿ ಸಾವ!
ಸತ್ತವರ ಹೆಸರ ಪತ್ರವ ಓದಿದಡೆ,
ಅದೆತ್ತಣ ಮುಕ್ತಿಯೊ ಗುಹೇಶ್ವರಾ?
Transliteration Ādiyanariyade,
anādiyindattatta tānārembuda
vicārisi tiḷidu nōḍade,
māḍidaḍe phalavēnayyā basavayyā?
Sāvannakka sādhaneya māḍidaḍe,
kāduva dina innāvudayyā basavayyā?
Bāḷuvannakka bhajaneya māḍidaḍe
tānaha dina innāvudayyā basavayyā?
Idu kāraṇa,
Martyalōkada bhaktarugaḷellaru, tathyavanariyade,
mithyavane hiḍidu mithyavane
pūjisi vyartharāgi hōdaru,
tam'ma tāvariyade keṭṭaru.
Taleya koyidu dēhava kaḍidu, kaṇṇa kaḷedu
hoṭṭeya sīḷi, magana kondu bāṇasava māḍi,
vādige puraṅgaḷanoydu,
kāyaverasi kailāsakke hōdavarellaru bhaktarappare?
Avarige śivapathavu sādhyavāyitte? Bhava hiṅgitte?
Adu sahajave? Allalla nillu māṇu.
Naralōkadavarellaru narasansārakkoḷagādaru,
suralōkada surarugaḷella surasansārakkoḷagādaru,
rudralōkada rudrarugaḷella
Rudrasansārakkoḷagādaru,
munijanaṅgaḷellaru tapavemba sansārakkoḷagādaru,
jaṅgamava hiḍidavarellaru
sāyujyavemba sansārakkoḷagādaru,
liṅgava hiḍidavarellaru phala-padagaḷemba
sansārakkoḷagādaru,
intī sansārakkoḷagādavarella
māyeya hoḍegicca gelaballare?
Idu kāraṇa; nitya nijatattva
tānendariyade, `tattvamasi' vākyava
horahoragane baḷasi keṭṭarallā hiriyaru,
sattarallā nāyi sāva!
Sattavara hesara patrava ōdidaḍe,
adettaṇa muktiyo guhēśvarā?
Hindi Translation आदि न जाने,
अनादि से उधर उधर मैं कौन बिना परख समझ देखे ;
करेतो क्या फल है बसवय्या?
मरने तक साधना करेतो,
लड़ने का दिन और कौनसा है बसवय्या?
जीवन भर भजन करे तो
खुद बनने दिन और कौनसा है बसवय्या?
इस कारण_
मर्त्यलोक के सब भक्त सत्य न जाने,
मिथ्या को ही पकड़े, मिथ्या की पूजाकर, व्यर्थ हो गये।
अपने आप न समझे बिगड़े।
सिर मोचन, शरीर काटना, ऑंख निकालकर
पेट चीलना, बेटे को मारकर भोजन बनाकर,
वादी को पुर लेकर,
शरीर सहित कैलास गये, सब भक्त कहलाये?
उनको क्या शिवपथ साध्य हुआ था? भव दूर हुआ था?
क्या वह सहज है? नहीं नहीं रुक मत।
नरलोक के सब नर संसार में लगे हुए हैं।
सुरलोक के सब सुर संसार में लगे हुए हैं।
रुद्र लोक के सब रुद्र रुद्र संसार में लगे हुए हैं।
मुनिजन सब तप जैसे संसार में लगे हुए हैं
जंगम को पकड़े हुए सब सायुज्य जैसे संसार में लगे हुए हैं।
लिंग पकड़े हुए सब फल-पद जैसे संसार में लगे हुए हैं।
ऐसी संसार में लगेहुए सब माया बड़वाग्नि जीत सकेंगे?
इस कारण नित्य निजतत्व न समझे तत्वमसि वाक्य को
बाहरी बाहर उपयोग कर बिगड़े बुजुर्ग, कुत्ते की मौत मरे।
मरे हुओं का नाम पत्र देखे तो
वह कहाँ का मोक्ष गुहेश्वरा?
Translated by: Banakara K Gowdappa
Translated by: Eswara Sharma M and Govindarao B N