Index   ವಚನ - 3    Search  
 
ಭೃತ್ಯತ್ವದಿಂದ ಕಾಯ ಶುದ್ಧಮಾಗುವುದಯ್ಯ. ಭೃತ್ಯತ್ವದಿಂದ ಮನ ಸಿದ್ಧವಾಗುವುದಯ್ಯ. ಭೃತ್ಯತ್ವದಿಂದ ಭಾವ ಪ್ರಸಿದ್ಧವಾಗುವುದಯ್ಯ. ಭೃತ್ಯತ್ವದಿಂದ ಪ್ರಾಣ ಪರಬ್ರಹ್ಮವನೊಡಗೂಡುವುದಯ್ಯ. ಭೃತ್ಯತ್ವದಿಂದ ಕಾಮ ನಿಷ್ಕಾಮವಾಗುವುದಯ್ಯ. ಭೃತ್ಯತ್ವದಿಂದ ಕ್ರೋಧ ನಿಃಕ್ರೋಧವಾಗುವುದಯ್ಯ ಭೃತ್ಯತ್ವದಿಂದ ಲೋಭ ನಿರ್ಲೋಭವಾಗುವುದಯ್ಯ. ಭೃತ್ಯತ್ವದಿಂದ ಮೋಹ ನಿರ್ಮೋಹವಾಗುವುದಯ್ಯ. ಭೃತ್ಯತ್ವದಿಂದ ಮದ ನಿರ್ಮದವಾಗುವುದಯ್ಯ. ಭೃತ್ಯತ್ವದಿಂದ ಮತ್ಸರ ನಿರ್ಮತ್ಸರವಾಗುವುದಯ್ಯ. ಭೃತ್ಯತ್ವದಿಂದ ಆಸೆ ನಿರಾಸೆಯಾಗುವುದಯ್ಯ. ಭೃತ್ಯತ್ವದಿಂದ ಕುಚಿತ್ತ ಸುಚಿತ್ತವಾಗುವುದಯ್ಯ. ಭೃತ್ಯತ್ವದಿಂದ ಕುಬುದ್ಧಿ ಸುಬುದ್ಧಿಯಾಗುವುದಯ್ಯ. ಭೃತ್ಯತ್ವದಿಂದ ಅಹಂಕಾರ ನಿರಹಂಕಾರವಾಗುವುದಯ್ಯ. ಭೃತ್ಯತ್ವದಿಂದ ಕುಮನ ಸುಮನವಾಗುವುದಯ್ಯ. ಭೃತ್ಯತ್ವದಿಂದ ಅಜ್ಞಾನ ಸುಜ್ಞಾನವಾಗುವುದಯ್ಯ. ಭೃತ್ಯತ್ವದಿಂದ ದುರ್ಭಾವ ಸದ್ಭಾವವಾಗುವುದಯ್ಯ. ಭೃತ್ಯತ್ವದಿಂದ ನಿಜನೈಷ್ಠೆ ದೊರವುದು ನೋಡ ಗುರುಹಿರಿಯರಲ್ಲಿ ಭೃತ್ಯತ್ವವುಳ್ಳಾತನೆ ಸಾಕ್ಷಾತ್ಪರತತ್ವಲಿಂಗ ನೋಡ, ಸಂಗನಬಸವೇಶ್ವರ