ಶ್ರೀ ಗುರುಲಿಂಗಜಂಗಮದ ಪಾದೋದಕದಿಂದ
ತನುವಿನ ಜಡತ್ವವಳಿದು ಶಿವಭಕ್ತಿಯ ಪಥವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಇಂದ್ರಿಯಂಗಳ ಜಡತ್ವವಳಿದು ಲಿಂಗೇಂದ್ರಿಯಂಗಳ
ಮಾಡುವುದಯ್ಯಾ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಕರಣಂಗಳ ಕಾಮವಿಕಾರವಳಿದು
ಲಿಂಗನಡೆ, ಲಿಂಗನುಡಿ, ಲಿಂಗನೋಟ, ಲಿಂಗಕೂಟ,
ಲಿಂಗಭೋಗ, ಲಿಂಗಾಚಾರವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಪ್ರಾಣನ ಪ್ರಪಂಚು ಸಂಚಲಗುಣವಳಿದು
ಮಂತ್ರಧ್ಯಾನದಲ್ಲಿ ನಿಲಿಸುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಅಜ್ಞಾನದ ಜಡತ್ವವಳಿದು ಸುಜ್ಞಾನಸುಖವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ದುರ್ವರ್ತನೆ ಗುಣವಳಿದು ಸದ್ವರ್ತನೆಗುಣವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ದುರಾಚಾರ ದುರ್ಮಾರ್ಗವ ಹರಿದು
ಸರ್ವಾಚಾರ ಸಂಪತ್ತಿನಾಚರಣೆಯ ಮಾರ್ಗವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಬಹುಜನ್ಮದ ಪರಮಪಾತಕದ ಮಹಾಪಾಪವ ತೊಳದು
ನಿರ್ಮಲ ಲಿಂಗಶರೀರವೆನಿಸುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಜೀವನ ಜಡತ್ವವಳಿದು ಅಜಡಸ್ವರೂಪವ ಮಾಡಿ,
ಗಣ ಸಮ್ಮೇಳನದಲ್ಲಿರಿಸುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಮಲ ಮಾಯಾ ಕರ್ಮ ಪಾಶವ ಹರಿದು
ನಿರ್ಮಲ ನಿರ್ಮಾಯ ನಿಷ್ಕರ್ಮ ಸ್ವರೂಪವ ಮಾಡಿ,
ಚಿಜ್ಜ್ಯೋತಿಸ್ವರೂಪವೆಂದೆನಿಸುವುದು ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕವೆ
ಪರಾತ್ಪರ ದೇವಲೋಕದ ದೇವಗಂಗಾಜಲ,
ಶಿವಲೋಕದ ಶಿವಗಂಗಾಜಲ, ಶಾಂಭವಲೋಕದ
ಪರಮಗಂಗಾಜಲವಾಗಿ ನೆಲಸಿರ್ಪುದು ನೋಡ
ಸಂಗನಬಸವೇಶ್ವರ
Art
Manuscript
Music
Courtesy:
Transliteration
Śrī guruliṅgajaṅgamada pādōdakadinda
tanuvina jaḍatvavaḷidu śivabhaktiya pathava tōruvudayya.
Śrīguruliṅgajaṅgamada pādōdakadinda
indriyaṅgaḷa jaḍatvavaḷidu liṅgēndriyaṅgaḷa
māḍuvudayyā.
Śrīguruliṅgajaṅgamada pādōdakadinda
karaṇaṅgaḷa kāmavikāravaḷidu
liṅganaḍe, liṅganuḍi, liṅganōṭa, liṅgakūṭa,
liṅgabhōga, liṅgācārava tōruvudayya.
Śrīguruliṅgajaṅgamada pādōdakadinda
prāṇana prapan̄cu san̄calaguṇavaḷidu
mantradhyānadalli nilisuvudayya.
Śrīguruliṅgajaṅgamada pādōdakadinda
Ajñānada jaḍatvavaḷidu sujñānasukhava tōruvudayya.
Śrīguruliṅgajaṅgamada pādōdakadinda
durvartane guṇavaḷidu sadvartaneguṇava tōruvudayya.
Śrīguruliṅgajaṅgamada pādōdakadinda
durācāra durmārgava haridu
sarvācāra sampattinācaraṇeya mārgava tōruvudayya.
Śrīguruliṅgajaṅgamada pādōdakadinda
bahujanmada paramapātakada mahāpāpava toḷadu
nirmala liṅgaśarīravenisuvudayya.
Śrīguruliṅgajaṅgamada pādōdakadinda
jīvana jaḍatvavaḷidu ajaḍasvarūpava māḍi,
gaṇa sam'mēḷanadallirisuvudayya.
Śrīguruliṅgajaṅgamada pādōdakadinda
mala māyā karma pāśava haridu
Nirmala nirmāya niṣkarma svarūpava māḍi,
cijjyōtisvarūpavendenisuvudu nōḍa.
Śrīguruliṅgajaṅgamada pādōdakave
parātpara dēvalōkada dēvagaṅgājala,
śivalōkada śivagaṅgājala, śāmbhavalōkada
paramagaṅgājalavāgi nelasirpudu nōḍa
saṅganabasavēśvara