ಆದಿವಿಡಿದು ಬಹಾತ ಭಕ್ತನಲ್ಲ,
ಅನಾದಿವಿಡಿದು ಬಹಾತ ಮಾಹೇಶ್ವರನಲ್ಲ.
ಸ್ಥಲವಿಡಿದು ಬಹಾತ ಪ್ರಸಾದಿಯಲ್ಲ,
ಇಷ್ಟಲಿಂಗದಲ್ಲಿ ಪ್ರಸಾದವ ಕೊಂಬಾತ ಪ್ರಾಣಲಿಂಗಿಯಲ್ಲ,
ಲಿಂಗವಿಡಿದು ಬಹಾತ ಶರಣನಲ್ಲ,
ಭಿನ್ನಭಾವವಿಡಿದು ಬಹಾತ ಐಕ್ಯನಲ್ಲ,
ಶೂನ್ಯಕಾಯವ ನಿಶ್ಶೂನ್ಯಂಗಿಕ್ಕಿ,
ಪ್ರಾಣಲಿಂಗಪ್ರಸಾದವ ಕೊಳಬಲ್ಲನಾಗಿ
ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಂಗೆ
ನಮೋ ನಮೋ ಎಂಬೆನು.
Transliteration Ādiviḍidu bahāta bhaktanalla,
anādiviḍidu bahāta māhēśvaranalla.
Sthalaviḍidu bahāta prasādiyalla,
iṣṭaliṅgadalli prasādava kombāta prāṇaliṅgiyalla,
liṅgaviḍidu bahāta śaraṇanalla,
bhinnabhāvaviḍidu bahāta aikyanalla,
śūn'yakāyava niśśūn'yaṅgikki,
prāṇaliṅgaprasādava koḷaballanāgi
guhēśvaraliṅgadalli cennabasavaṇṇaṅge
namō namō embenu.
Hindi Translation आदि अपनाकर आनेवाला भक्त नहीं,
अनादि अपनाकर आनेवाला माहेश्वर नहीं,
इष्टलिंग में प्रसाद लेनेवाला प्राणलिंगी नहीं,
लिंग अपनाकर आनेवाला शरण नहीं,
भिन्नभाव अपनाकर आनेवाला ऐक्य नहीं,
शून्य शरीर को निःशून्य में रखे,
प्राणलिंग, प्रसाद लेनेवाला बने
गुहेश्वरलिंग में चेन्नबसवण्णा को नमो नमो कहूँगा।
Translated by: Eswara Sharma M and Govindarao B N