Index   ವಚನ - 82    Search  
 
ಅಯ್ಯ, ಗುರುಕರಜಾತನಾಗಿ ಪ್ರಮಥರಾಚರಿಸಿದ ಸನ್ಮಾರ್ಗದಲ್ಲಾಚರಿಸಿ, ಮಹಾಲಿಂಗೈಕ್ಯಾನುಭಾವಿಯಾದ ಮೇಲೆ 'ಆಯುಃ ಕರ್ಮ [ಚ] ವಿತ್ತಂ ಚ' ಎಂದು ಇದಕ್ಕಂಜಿ ಉಮ್ಮಳಿಸುವ ಮಾಯಾಪ್ರಸೂತಿ ಮನವ ನೋಡ. ಆಯುಷ್ಯವೆ ಚಿದ್ಘನಮಹಾಲಿಂಗ, ಶ್ರೀಯೆ ಚಿದ್ಘನಮಹಾಜಂಗಮ, ನಿಧಿನಿಧಾನವೆ ಚಿದ್ಘನ ಮಹಾಪ್ರಮಥಗಣ ಶರಣರ ಭೃತ್ಯಭಕ್ತಿ ವಿದ್ಯವೆ ಪಂಚಾಕ್ಷರ-ಷಡಾಕ್ಷರ ಮೊದಲಾದ ಮಹಾಶಿವಮಂತ್ರ. ದೇಹವೆ ಗುರುಚರಪರಕ್ಕೆ ಅಷ್ಟವಿಧಾರ್ಚನೆ- ಷೋಡಶೋಪಚಾರವಾಗಲೆಂದು ಶ್ರೀಗುರುಬಸವಲಿಂಗ ಬರದನಾಗಿ ಹೊಟ್ಟೆಯ ಶಿಶುವಿಂಗೆ ಬೇರೆ ನೈವೇದ್ಯವುಂಟೇನೋ ? ಶಾಂತಚಿದ್ಘನಮಹಾಲಿಂಗದಲ್ಲಿ ಸಂತೃಪ್ತನಾದ ಅಯೋನಿಸಂಭವ ನಿಜಶರಣ ನಿತ್ಯಮುಕ್ತಂಗೆ ನೋಡ ಸಂಗನಬಸವೇಶ್ವರ.