Index   ವಚನ - 12    Search  
 
ಗುರುಲಿಂಗಜಂಗಮವೆಂದು ನುಡಿವ ಬಹುವಾಕ್ಯರು ನೀವು ಕೇಳಿರೊ. ಗುರುವಾವುದು? ಲಿಂಗವಾವುದು? ಜಂಗಮವಾವುದು? ಲಿಂಗವೆಂದವರ ಕರಸ್ಥಲದಲ್ಲಿ ಜಂಗಮವೊಂದೆಂದರಿಯದಿರದೆ ಚರಿಸಿದ ಗುರುಸ್ಥಲದ ಹೊಲಬನರಿಯದೆ ಗುರುಭಕ್ತರೆನ್ನಿಸುವ ಗುರುದ್ರೋಹಿಗಳ ಮಾತ ಕೇಳಲಾಗದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗ.