Index   ವಚನ - 1    Search  
 
ಕಾಯದ ಕಂಥೆಯ ಹಿಡಿದು ಅಕಾಯಚರಿತ್ರ ಪರಮನೆಂಬ ಜಂಗಮ ಬಂದು, ಕರ ಖರ್ಪರವನಳವಡಿಸಿಕೊಂಡು ಭಿಕ್ಷೆಕ್ಕೆ ನಡೆಯಲು ಕೇಳಿದ. ಇಂದ್ರಿಯಂಗಳು ನಿಲಲಮ್ಮದೆ ಕಡೆಯ ಬಾಗಿಲಲ್ಲಿ ನಿಲಿಕೆ ನೋಡುತಿರ್ದಯ್ಯಾ! ದಶೇಂದ್ರಿಯಂಗಳು ಪ್ರದಕ್ಷಿಣ ಬಂದು ತಮಗೆ ತಾವೇ ಅಂಜಿ ಓಡಿ[ದವು] ಕೇಟೇಶ್ವರಲಿಂಗನ ಶರಣನಿಂದ ಕೇಳಿದಾಕ್ಷಣ.