Index   ವಚನ - 16    Search  
 
ವೃಕ್ಷಕ್ಕೆ ಭೂಮಿ ಮುಖವೋ? ಭೂಮಿಗೆ ವೃಕ್ಷ ಮುಖವೋ? ಶರಣಂಗೆ ಅಂಗ ಮುಖವೋ? ಲಿಂಗಕ್ಕೆ ಶರಣ ಮುಖವೋ? ಈ ಭೇದವ ಬಲ್ಲರೆ ಹೇಳಿರಿ. ವೃಕ್ಷಕ್ಕೆ ನೀರು ಎರೆದರೆ ಭೂಮಿಯಲ್ಲಿ ಫಲವಹುದು, ಭೂಮಿಯಲ್ಲಿ ನೀರೆರೆದರೆ ವೃಕ್ಷಕ್ಕೆ ಫಲವಹುದು. ಶರಣನ ಮುಖದಲ್ಲಿ ಲಿಂಗ ತೃಪ್ತಿಯಹುದು, ಲಿಂಗದ ಮುಖದಲ್ಲಿ ಶರಣನ ತೃಪ್ತಿಯಹುದು. ಆ ಲಿಂಗಮುಖ ಶರಣನೆಂದು ಅರಿಯದ ಭಂಗಿತರಿಗೆ ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.