Index   ವಚನ - 27    Search  
 
ಭವಿ ಮಾಡಿದುದನುಂಡರೆ ಪಾಕ ಕಿಲ್ಬಿಷವೆಂಬಿರಿ. ಶಿವಭಕ್ತರು ಪಾದೋದಕ ಪ್ರಸಾದವ ಕೊಂಬುವಲ್ಲಿ ಭವಿಮಿಶ್ರವೆಂದು ವಿಚಾರಿಸಿ ಕೇಳುವಿರಿ. ಬೆಲ್ಲ, ಸಕ್ಕರೆ, ಉಪ್ಪು, ತೈಲ, ತುಪ್ಪ, ಭವಿಪಾಕವ ಭುಂಜಿಸುವಿರಿ. 'ಯಥಾ ದೇಹಂ ತಥಾಹಂ ಚ ಲಿಂಗವಾಯತೆ' ಭವಿಪಾಕ ಕಿಲ್ಬಿಷವೆಂದು ಕಿಲ್ಬಿಷವ ಭುಂಜಿಸಿದ ಬಳಿಕ ಅಚ್ಚಲಿಂಗಾಗವೆಲ್ಲಿಹುದೊ ವ್ರತಗೇಡಿಗಳಿರಾ? ನಿಮ್ಮ ದೇವಭಕ್ತರೆಂದು ಪೂಜಿಸಿದವರಿಗೆ ಭವ ತಪ್ಪದು. ನಮ್ಮ ಶಿವಗಣಂಗಳು ಅಚ್ಚಲಿಂಗೈಕ್ಯರು. ಅವರು ಅನಾದಿ ಪಾದೋದಕ ಪ್ರಸಾದವ ಕೊಂಬುವರು. ಅವರು ಅನಾದಿಲಿಂಗಾಂಗಿಗಳು. ಅವರು ಮುಟ್ಟಿದ್ದೆಲ್ಲ ಪಾವನ ಅವರು ನೋಡಿದ್ದೆಲ್ಲ ಪವಿತ್ರವೆಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.