Index   ವಚನ - 8    Search  
 
ಲೋಕ ಲೌಕಿಕಂಗಳಿಲ್ಲದಂದು, ಕುಲ ಛಲಂಗಳಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು, ದೇಹ ನಿರ್ದೆಹಗಳಿಲ್ಲದಂದು, ಪ್ರಾಣ ನಿಃಪ್ರಾಣಂಗಳಿಲ್ಲದಂದು, ಇವೇನೇನೂ ಇಲ್ಲದಂದು, ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.