ಸದಾಸನ್ನಹಿತವಾದ ಶರಣನು ನಿತ್ಯನಿಜದಾರಂಭಕೆ ಹೋಗಿ
ಸಕಲಕರ್ಮಂಗಳಿಗೆ ವಿರಹಿತವಾಗಿಪ್ಪನಯ್ಯಾ.
ಸಕಲದೋಷಂಗಳಿಗೆ ವಿರಹಿತನಾಗಿಪ್ಪನಯ್ಯಾ.
ಸಕಲಪ್ರಪಂಚಗಳಿಗೆ ವಿರಹಿತನಾಗಿಪ್ಪನಯ್ಯಾ.
ಸಕಲವಾಸನೆಗಳಿಗೆ ವಿರಹಿತನಾಗಿಪ್ಪನಯ್ಯಾ.
ಸಕಲಭ್ರಮೆಯಂಗಳಿಗೆ ವಿರಹಿತನಾಗಿಪ್ಪನಯ್ಯಾ.
ಸಕಲನಿಷ್ಕಲದಲ್ಲಿ ಎಯ್ದಿದ ಸದಾಸನ್ನಹಿತವಾದ ಶರಣನ
ಅಂತರಂಗವ ಪೊಕ್ಕು ನಾನು ಬದುಕಿದೆನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sadāsannahitavāda śaraṇanu nityanijadārambhake hōgi
sakalakarmaṅgaḷige virahitavāgippanayyā.
Sakaladōṣaṅgaḷige virahitanāgippanayyā.
Sakalaprapan̄cagaḷige virahitanāgippanayyā.
Sakalavāsanegaḷige virahitanāgippanayyā.
Sakalabhrameyaṅgaḷige virahitanāgippanayyā.
Sakalaniṣkaladalli eydida sadāsannahitavāda śaraṇana
antaraṅgava pokku nānu badukidenayyā
jhēṅkāra nijaliṅgaprabhuve.