ಹದಿನಾರು ಎಸಳ ಸ್ಥಾವರಗದ್ದುಗೆಯಿಂದತ್ತತ್ತ,
ಚಂದ್ರಕಾಂತದ ಲಿಂಗವ ಕಂಡೆನಯ್ಯಾ.
ಆ ಲಿಂಗದ ಬೆಳಕು ಕೆಳಗೇಳು ಲೋಕಕ್ಕೆ ಮೇಲೇಳು ಲೋಕಕ್ಕೆ
ನಿರಾಳಬಯಲ ತೋರಿತ್ತು.
ಆ ಲಿಂಗದ ಬೆಳಗಿನೊಳಗೆ
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಿಂದತ್ತತ್ತ
ಸಾವಿರೆಸಳ ಮಂಟಪವ ಪೊಕ್ಕು, ನಿರಾಲಂಬಲಿಂಗದೊಳು ಕೂಡಿ
ನಿಃಪ್ರಿಯನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Hadināru esaḷa sthāvaragaddugeyindattatta,
candrakāntada liṅgava kaṇḍenayyā.
Ā liṅgada beḷaku keḷagēḷu lōkakke mēlēḷu lōkakke
nirāḷabayala tōrittu.
Ā liṅgada beḷaginoḷage
bhakta mahēśvara prasādi prāṇaliṅgi śaraṇa aikyanindattatta
sāviresaḷa maṇṭapava pokku, nirālambaliṅgadoḷu kūḍi
niḥpriyanāda nōḍā
jhēṅkāra nijaliṅgaprabhuve.