Index   ವಚನ - 106    Search  
 
ಒಬ್ಬಳ ಸಂಗದಿಂದ ಐವರು ಮೊದಲಗಿತ್ತೇರು ಬಂದ ಬೆಡಗ ನೋಡಾ! ಮಹಾ ಅರಿವುಯೆಂಬ ಗದ್ದುಗೆಯ ಮೇಲೆ, ಮದಲಿಂಗನ ಕುಳ್ಳಿರಿಸಿ, ಕೆಂಡದ ಬಾಸಿಂಗ ಕಟ್ಟಿ, ಉರಿಯ ಹಚ್ಚಡ ಹೊಚ್ಚಿ, ಆ ಮದಲಿಂಗನ ಬಸುರಲಿ ಬಂದ ಶಿಶುವು ನಲಿನಲಿದಾಡುತ್ತ ಇರಲು ಅಲ್ಲಿ ಒಬ್ಬಳು ಕಂಡು ಎತ್ತಿಕೊಂಡು ಗಮನಕ್ಕೆ ನಿರ್ಗಮನವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.