Index   ವಚನ - 111    Search  
 
ಕೋಳಿಯ ಧ್ವನಿಯ ಕೇಳಿ ಒಬ್ಬಳು ತಿಪ್ಪೆಯ ಸೋಸಿ ನೋಡುವ ವ್ಯಾಳ್ಯದಲ್ಲಿ, ಒಂದು ಸರ್ಪನ ತಲೆಯ ಮೇಲೆ ರತ್ನವಿರ್ಪುದ ಕಂಡೆನಯ್ಯ ! ಆ ರತ್ನವ ಕಪ್ಪೆ ನುಂಗಿದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.