Index   ವಚನ - 119    Search  
 
ಮೇರುವೆಯ ಗುಡಿಯಲ್ಲಿ ಒಬ್ಬ ಪುರುಷನು ಲಿಂಗಾರ್ಚನೆಯ ಮಾಡುವ ವೇಳ್ಯೆಯಲ್ಲಿ ಪಂಚಮುಖದ ಸರ್ಪನು ಹೆಡೆಯನೆತ್ತಿ ಬರಲು ಆ ಸರ್ಪನ ಕಪ್ಪೆ ನುಂಗಿ ನಿರ್ವಯಲಾದ ವಿಚಿತ್ರದಿಂದ ಆ ಪುರುಷ ಲಿಂಗದೊಳು ಅಡಗಿ ನಿಶ್ಯಬ್ದವಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.