ಆಕಾಶವೆಂಬ ಲಿಂಗಕ್ಕೆ ಐದು
ಮುಖಂಗಳು ತೋರಿದವು ನೋಡಾ !
ಒಂದು ಮುಖದಲ್ಲಿ ಲಿಂಗವ ಸಂಬಂಧಿಸಿ,
ಒಂದು ಮುಖದಲ್ಲಿ ಅಂಗವ ಸಂಬಂಧಿಸಿ,
ಒಂದು ಮುಖದಲ್ಲಿ ಸಂಬಂಧವ ಸಂಬಂಧಿಸಿ,
ಒಂದು ಮುಖದಲ್ಲಿ ನಾನು ಸಂಬಂಧಿಸಿ,
ಒಂದು ಮುಖದಲ್ಲಿ ನೀನು ಸಂಬಂಧಿಸಿ,
ನಾನೂ ಇಲ್ಲದೆ, ನೀನೂ ಇಲ್ಲದೆ, ನಿರಾಲಂಬಲಿಂಗದೊಳು
ನಿಃಪ್ರಿಯವಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.