Index   ವಚನ - 130    Search  
 
ಆರು ನೆಲೆಯ ಮಂಟಪದ ಮುಂದೆ ಮೂರು ಕೋಣೆಯ ಕಂಡೆನಯ್ಯ. ಮೂರು ಕೋಣೆಯ ಮುಂದೆ ಸಾಸಿರದಳದ ಕಮಲವ ಕಂಡೆನಯ್ಯ. ಆ ಸಾಸಿರದಳದ ಮುಂದೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ತನ್ನ ಮರೆದು ಮುಂದೆ ಕಾಣಬಲ್ಲಾತನೆ ನಿಮ್ಮ ಪ್ರಮಥ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.