Index   ವಚನ - 133    Search  
 
ಬಯಲಲ್ಲಿ ಒಂದು ಪಕ್ಷಿ ಗೂಡನಿಕ್ಕುವುದ ಕಂಡೆನಯ್ಯ. ಆ ಪಕ್ಷಿಯ ಒಡಲಲ್ಲಿ ಮೂರು ಹಂಸಗಳು ಹುಟ್ಟಿ, ಒಂದು ಹಂಸ ಪಾತಾಳಲೋಕಕ್ಕೆ ಮರ್ತ್ಯಲೋಕಕ್ಕೆ ಹೋಯಿತ್ತು. ಒಂದು ಹಂಸ ಸ್ವರ್ಗಲೋಕಕ್ಕೆ ತತ್ಪುರುಷಲೋಕಕ್ಕೆ ಹೋಯಿತ್ತು. ಒಂದು ಹಂಸ ಈಶಾನ್ಯಲೋಕಕ್ಕೆ ಅಂಬರಲೋಕಕ್ಕೆ ಹೋಯಿತ್ತು. ಆ ಪಕ್ಷಿಯ ನಿರ್ವಯಲು ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.