Index   ವಚನ - 153    Search  
 
ಆಧಾರದಲ್ಲಿ ಬ್ರಹ್ಮನೆಂಬ ಮೂರ್ತಿ. ಸ್ವಾಧಿಷ್ಠದಲ್ಲಿ ವಿಷ್ಣುವೆಂಬ ಮೂರ್ತಿ. ಮಣಿಪೂರಕದಲ್ಲಿ ರುದ್ರನೆಂಬ ಮೂರ್ತಿ ಅನಾಹತದಲ್ಲಿ ಈಶ್ವರನೆಂಬ ಮೂರ್ತಿ ವಿಶುದ್ಧಿಯಲ್ಲಿ ಸದಾಶಿವನೆಂಬ ಮೂರ್ತಿ ಆಜ್ಞೇಯದಲ್ಲಿ ಪರಶಿವನೆಂಬ ಮೂರ್ತಿ ಅಲ್ಲಿಂದತ್ತತ್ತಲೆ ನಿರವಯ ಪರಬ್ರಹ್ಮವು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.