ವಚನ - 928     
 
ಇದು ಲೇಸಾಯಿತ್ತು: ತುಂಬಿದ ಲೆಕ್ಕಕ್ಕೆ ಮತ್ತೊಂದೆಂದು ಕಡೆಗಾಣಿಸುವಂತೆ, ಸ್ಥಾಣುವಿನ ಮರೆಯ ಚೋರನಂತೆ, ಅಂಬುಧಿಯೊಳಗಣ ಕೊಂಬಿನಲ್ಲಿದ್ದ ವಿಹಂಗನಂತೆ, ಎಲ್ಲಿ ಸುತ್ತಿ ಬಂದಡೂ ಗುಹೇಶ್ವರನೆಂಬ ಭಾವ ಒಂದಾಯಿತ್ತು! ಕಾಣಾ ಎಲೆ ತಾಯೆ!