Index   ವಚನ - 172    Search  
 
ಧರ್ಮವೆಂಬ ದಾರಿಯಲ್ಲಿ ಒಬ್ಬ ಸತಿಯಳು ನಿಂದು ವರ್ಮವ ಮಾಡುತಿರ್ಪಳು ನೋಡಾ! ಆ ವರ್ಮವ ಈ ಲೋಕದವರು ಆರಾರು ಕೇಳಬಲ್ಲರೆ ಅಯ್ಯಾ? ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ಅಗೋಚರವೆನಿಸಿತ್ತು ಅಯ್ಯಾ! ಇದು ಕಾರಣ ನಿರ್ದ್ವಂದ್ವವಾದ ಶರಣನು ಆ ವರ್ಮವ ಕೊಳಬಲ್ಲನಯ್ಯ. ಆ ವರ್ಮದ ದಾರಿಯ ನೆರೆ ಬಲ್ಲನಯ್ಯ ಆ ಸತಿಯಳ ಅಂಗವ ಕೂಡಬಲ್ಲನಯ್ಯ ನಿಷ್ಪತಿಲಿಂಗದಲ್ಲಿ ರಾಜಿಸಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.