Index   ವಚನ - 176    Search  
 
ಆಕಾರ ನಿರಾಕಾರವಿಲ್ಲದಂದಿನ ಋತುವಡಗಿದ ಲಿಂಗವು ನೆನೆದ ಕಾರಣ, ನಿರ್ಮಾಯವೆಂಬ ಸತಿಯಳು ಹುಟ್ಟಿದಳು ನೋಡಾ! ಆಕೆಯ ಅಂಗದಲ್ಲಿ ಮೂವರು ಹುಟ್ಟಿದರು ನೋಡಾ! ಆರು ದೇಗುಲವ ಕಟ್ಟಿಸಿ, ನವಗೃಹಗಳ ಮೀರಿ ನಿಂದಿರುವ ಸತಿಯಳ ಕಂಡು ಎನ್ನ ಮನಕ್ಕೆ ನಿಶ್ಚಿಂತವಾಯಿತ್ತು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.