ಕಬ್ಬುನದ ಗುಂಡಿಗೆಯಲ್ಲಿ [ರಸದ] ಭಂಡವ ತುಂಬಿ,
ಹೊನ್ನ ಮಾಡ ಬಲ್ಲಡೆ ಅದು ಪರುಷ ಕಾಣಿರಣ್ಣಾ.
ಲಿಂಗ ಬಂದು ಉಂಬಡೆ, ಪ್ರಸಾದ ಕಾಯವಪ್ಪಡೆ,
ಅಂದಂದಿಂಗೆ ಭವಕರ್ಮ ಮುಟ್ಟಲಮ್ಮದು ಕಾಣಿರೆ.
ಆದಿಯ ಪ್ರಸಾದಕ್ಕೆ ಬಾಧೆಯಿಲ್ಲ ಕಾಣಿರೆ.
ಶಶಿಯಲ್ಲಿ ಕರಗದು ಬಿಸಿಲಲ್ಲಿ ಕೊರಗದು,
ರಸವುಂಡ ಹೊನ್ನು, ಗುಹೇಶ್ವರಾ ನಿಮ್ಮ ಶರಣ!
Transliteration Kabbunada guṇḍigeyalli (rasada) bhaṇḍava tumbi,
honna māḍa ballaḍe adu paruṣa kāṇiraṇṇā.
Liṅga bandu umbaḍe prasāda kāyavappaḍe,
andandiṅge bhavakarma muṭṭalam'madu kāṇire.
Ādiya prasādakke bādheyilla kāṇire.
Śaśiyalli karagadu bisilalli koragadu,
rasavuṇḍa honnu -guhēśvarā nim'ma śaraṇa!
Hindi Translation लोहे की कुंडी में रस भरे तो
कुंडी सोना बने तो वह परूषमणि ही देखिये।
लिंग आकर भोजन करे तो, प्रसाद शरीर हो तो
उस समय में भवकर्म नहीं छू सकता देखिये।
आदि प्रसाद की बाधा नहीं देखिये।
चांदनी में न पिधलता, धूप में न मुरझता,
रस पिया सोना गुहेश्वरा, तुम्हारा शरण।
Translated by: Eswara Sharma M and Govindarao B N
Tamil Translation இரும்புக் கலத்தில் பாதரசத்தை நிறைத்து
பொன்னாக மாற்ற வியன்றால் அது பரிசனவேதி, காணீரோ
இலிங்கபக்தி உதிப்பின், அருள் நிறையின்
அவ்வப்பொழுது பிறவியை ஏற்படுத்தும் வினைகள்
அணுகாது காணீர்! ஆதியின் அருள் பெற்றவனுக்கு
துன்பமேதுமில்லை காணீர், திங்களொளியில் கரையாது
வெயிலில் வாடிவதங்காது குஹேசுவரனே
உம் சரணன் பக்திரசத்தை அருந்தியபொன் ஆவான்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂದಂದಿಗೆ = ಆಗಾಗ; ಆದಿಯ ಪ್ರಸಾದ = ಲಿಂಗಸ್ಪರ್ಶದಿಂದುಂಟಾಗುವ ಪ್ರಸಾದ; ಗುಂಡಿಗೆ = ಪಾತ್ರೆ; ಪರುಷ = ಕಬ್ಬುನವನ್ನು ಹೊನ್ನಾಗಿಸುವ ವಸ್ತು ಮತ್ತು ಕ್ರಿಯೆ; ಪ್ರಸಾದಕಾಯವಪ್ಪಡೆ = ಕಾಯವು ಪ್ರಸಾದವಾದರೆ; ಭವಕರ್ಮ = ಭವ ಉಂಟುಮಾಡುವ ಕರ್ಮ; ರಸದ ಭಂಡ = ಸಿದ್ಧರಸ; ಲಿಂಗ ಬಂದುಂಬಡೆ = ಲಿಂಗವು ಬಂದು ವ್ಯಾಪಿಸಿದರೆ ಅಥವಾ ಲಿಂಗಭಕ್ತಿಯು ಉದಿಸಿ ವ್ಯಾಪಿಸಿದರೆ;
Written by: Sri Siddeswara Swamiji, Vijayapura