Index   ವಚನ - 185    Search  
 
ಐದು ಎಲೆಯ ಮಂಟಪದ ಮೇಲೆ ಒಂದು ಲಿಂಗದ ಗುಡಿಯ ಕಂಡೆನಯ್ಯ. ಆ ಗುಡಿಯೊಳಗೆ ಒಬ್ಬ ಸತಿಯಳು ನಿಂದು ತನ್ನ ಸುಳುವಿನ ಭೇದವ ತಾನೇ ನೋಡುತಿರ್ಪಳು ನೋಡಾ! ಮೇಲಿಂದ ಒಬ್ಬ ಪುರುಷನು ಆ ಸತಿಯಳ ಕೈವಿಡಿದು ನಿರ್ವಯಲಾದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.