ಓಂಕಾರವೆಂಬ ಲಿಂಗದಲ್ಲಿ ನುಡಿದಾಡುವನಾರಯ್ಯ?
ನೋಡುವನಾರಯ್ಯ? ಕೊಂಬುವನಾರಯ್ಯ?
ಇಂತೀ ಭೇದವರಿತು ಸದಾಶಿವಲಿಂಗದಲ್ಲಿ ನೆಲೆಯಂಗೊಂಡು
ಐದು ಅಂಗವ ಗರ್ಭಿಕರಿಸಿಕೊಂಡು
ಈಶ್ವರನೆಂಬ ಮೆಟ್ಟಿಗೆಯ ಮೆಟ್ಟಿ
ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು
ಒಂಬತ್ತು ನೆಲೆಯ ಮೇಲೆ ನಡೆದು ಹೋಗುವ
ಗಂಭೀರ ನಿರವಯನೆಂಬ[ನ] ಸತಿಯಳುವಿಡಿದು
ಎಂತಿರ್ದಂತಿರ್ದಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ