Index   ವಚನ - 196    Search  
 
ಆರು ಕೋಟೆಯಮೇಲೆ ಮೂರು ಕೊತ್ತಳವ ಕಂಡೆನಯ್ಯ, ಮೂರು ಕೊತ್ತಳದ ಮೇಲೆ ಒಬ್ಬ ತಳವಾರನು ಆ ಊರ ಕಾವುತಿರ್ಪನು ನೋಡಾ, ಆ ತಳವಾರನ ಹೆಜ್ಜೆಯತ್ತ ನೋಡಲು ಹೆಜ್ಜೆ ಹೋದವು ಸಂಗಸಂಯೋಗವೆಂಬ ಲಿಂಗದ ಗುಡಿಗೆ, ಆ ಹೆಜ್ಜೆಯನರಿವ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.