Index   ವಚನ - 217    Search  
 
ಮೂರು ಕೊಂಬೆಯ ಮೇಲೆ, ಕೋಗಿಲೆ ಕುಳಿತು ಕೂಗುತಿದೆ ನೋಡಾ. ಆ ಕೋಗಿಲೆ ಕೂಗಿದ ನಾದಕ್ಕೆ ಸಪ್ತೇಳುಸಾಗರಂಗಳು ಅರತಿದ್ದವು ನೋಡಾ. ಸ್ವರ್ಗ ಮರ್ತ್ಯ ಪಾತಾಳಂಗಳು ಅಡಗಿರ್ದವು ನೋಡಾ. ಅಷ್ಟಕುಲಪರ್ವತಂಗಳು ಕರಗಿದವು ನೋಡಾ. ಈರೇಳುಭುವನ ಹದಿನಾಲ್ಕುಲೋಕಂಗಳೆಲ್ಲಾ ಬಯಲಾದವು ನೋಡಾ. ಮೂರು ಕೊಂಬೆಗಳು ಅಳಿದುಹೋದವು ನೋಡಾ. ನಿಶ್ಚಿಂತ ನಿರಾಕುಳನೆಂಬ ಗುಡಿಗೆ ಆ ಕೋಗಿಲೆ ಹಾರಿಹೋಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.