ಬಯಲಿಂಗೆ ಬಯಲಾದ ಮನೆಯಲ್ಲಿ ಮೂವರು ಮಕ್ಕಳು
ಆರು ಕೇರಿಯ ಹೊಕ್ಕು, ಶಿವಾಲಯ ಕಟ್ಟಿಸುವುದ ಕಂಡೆನಯ್ಯ.
ಅದು ಹೇಗೆಂದಡೆ:
ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬವ ನಿಲಿಸಿ
ಇಪ್ಪತ್ತೈದು ಬೋದಂಗಳ ಭೇದಿಸಿ,
ಮಹಾಜ್ಞಾನವೆಂಬ ತೊಲೆ ಜಂತಿಗಳ ಹಮ್ಮಿ,
ಸಾವಯವೆಂಬ ಮೇಲುಮುದ್ದಿಯ ಹಾಕಿ
ಪರಬ್ರಹ್ಮವೆಂಬ ಶಿಖರದ ಮೇಲೆ ನಿಷ್ಪತಿಲಿಂಗವಿಪ್ಪುದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.