Index   ವಚನ - 221    Search  
 
ಸ್ವರ್ಗ ಮರ್ತ್ಯ ಪಾತಾಳವ ಒಂದು ಹಂಸ ನುಂಗಿ, ಗಗನಕ್ಕೆ ಹಾರಿ, ಚಿದಂಗನೆಯ ಸಂಗವ ಮಾಡುತಿಪ್ಪುದು ನೋಡಾ. ಆ ಚಿದಂಗನೆಯ ಸಂಗದಿಂದ ಅವಿರಳ ಸ್ವಾನುಭವ ಸಿದ್ಧಾಂತವನರಿದು ಪರಕೆ ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.