Index   ವಚನ - 234    Search  
 
ಜ್ಞಾನವೆಂಬ ಗದ್ದುಗೆಯ ಮೇಲೆ ಸದಮಲವೆಂಬ ಪಾವಡವ ಹಾಸಿ, ಪರಬ್ರಹ್ಮವೆಂಬ ಲಿಂಗನ ಮೂರ್ತಿಗೊಳಿಸಿ, ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿರ್ದ್ವಂದ್ವವೆಂಬ ಧೂಪವ ತೋರಿ, ಹರಹರಾ ಶಿವಶಿವಾಯೆಂದು ಅರ್ಚಿಸುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.