ವಚನ - 936     
 
ಇಲ್ಲವೆಂದು ಸಂದೇಹಿಸಿದವಂಗೆ ಉಂಟೆಂದು ತೋರಿದನಲ್ಲದೆ, ಶ್ರೀಗುರು ಖೇಚರತ್ವವ ಬಿಟ್ಟು ಭೂಚರನಾಗಬಹುದೆ? ಮಹಾಘನಲಿಂಗವನು ಅರಿದು ನಂಬಿದ ಬಳಿಕ ಮುಚ್ಚುಮರೆಯುಂಟೆ ಗುಹೇಶ್ವರಾ?