Index   ವಚನ - 286    Search  
 
ಮಹಾಮನೆಗೆ ಹೋಗುವ ದಾರಿಯಲ್ಲಿ ಇಲಿ ಬೆಕ್ಕ ಹಿಡಿವುದ ಕಂಡೆನಯ್ಯ! ಮೊಲ ನಾಯ ನುಂಗುವುದ ಕಂಡೆನಯ್ಯ! ಇರುವೆ ಆಕಾಶವ ನುಂಗುವುದ ಕಂಡೆನಯ್ಯ! ಧೂಮ್ರ ಗಗನವ ನುಂಗುವುದ ಕಂಡೆನಯ್ಯ! ಕರಿ ಸಿಂಹನ ಸೀಳುವುದ ಕಂಡೆನಯ್ಯ! ಎರಳೆ ಹುಲಿಯ ಹಿಡಿವುದ ಕಂಡೆನಯ್ಯ! ಕಪ್ಪೆ ಸರ್ಪನ ನುಂಗುವುದ ಕಂಡೆನಯ್ಯ! ಬಯಲು ನಿರ್ವಯಲ ನುಂಗಿದ್ದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.