Index   ವಚನ - 291    Search  
 
ಕತ್ತಲೆ ಕವಿದ ಮಾನವರಿಗೆ ಜ್ಞಾನದ ಪ್ರಭೆಯುಂಟೇನಯ್ಯ? ಅಂಗವ ಮರೆದು ನಿಂದವರಿಗೆ ಆವ ಚಿಂತೆ ಉಂಟೇನಯ್ಯ? ಒಳಹೊರಗೆ ಪರಿಪೂರ್ಣವಾದ ಶರಣಂಗೆ ಆವ ಭ್ರಾಂತಿ ಉಂಟೇನಯ್ಯ? ಇದು ಕಾರಣ, ತನ್ನ ನಿಲವ ತಾನೇ ತಿಳಿಯಬಲ್ಲಾತನೆ ಪರಮಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.