Index   ವಚನ - 300    Search  
 
ಮನೆಮನೆಗೆ ಹಾರುವ ಕೋಡಗನ ಒಡಲಲ್ಲಿ ಅರವತ್ತಾರು ಕೋಟಿ ನುಸುಳುಗುಂಡಿಯ ಕಂಡೆನಯ್ಯ. ಆ ಕೋಡಗನ ಒಂದು ಇರುವೆ ನುಂಗಿತು ನೋಡಾ! ಆ ಇರುವೆಯ ತಲೆಯ ಮೇಲೆ ಒಂದು ಮೇರುವೆಯ ಕಂಡೆನಯ್ಯ. ಆ ಮೇರುವೆಯೊಳಗೊಬ್ಬ ಭಾಮಿನಿಯು ತನ್ನ ನಿಲವ ತಾನೆ ನೋಡಿ ನೋಡಿ ನಿಶ್ಚಿಯಿಸುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.