Index   ವಚನ - 307    Search  
 
ಚಿಪ್ಪಿನೊಳಗಣ ಮುತ್ತಿನಂತೆ, ಕಲ್ಲೊಳಗಣ ವಜ್ರದಂತೆ, ನಿರೊಳಗಣ ಪ್ರತಿಬಿಂಬದಂತೆ, ಕ್ಷೀರದೊಳಗಣ ಘೃತದಂತೆ, ಬೀಜದೊಳಗಣ ವೃಕ್ಷದಂತೆ, ಅಗ್ನಿಯೊಳಗಣ ಪ್ರಕಾಶದಂತೆ, ಭಾವದೊಳಗಣ ನಿರ್ಭಾವದಂತೆ ನಿಮ್ಮ ಶರಣ ಸಂಬಂಧವು ಝೇಂಕಾರ ನಿಜಲಿಂಗಪ್ರಭುವೆ.