Index   ವಚನ - 315    Search  
 
ಆರು ಸ್ಥಲದಲ್ಲಿ ಆರು ಮೂರ್ತಿಗಳ ಕಂಡೆನಯ್ಯ. ಆರು ಮುಖಂಗಳಲ್ಲಿ ಆರು ಲಿಂಗವ ಕಂಡೆನಯ್ಯ. ಆರರಿಂದತ್ತ ಮೀರಿದ ಮಹಾಮಹಿಮನ ಕಂಡು ನಿಶ್ಚಿಂತ ನಿರ್ವಾಸಿಗಳಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.