Index   ವಚನ - 317    Search  
 
ಆರು ಮೂರು ದೇಶದ ಮುಂದೆ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ. ಆ ಪುರುಷಂಗೆ ಒಬ್ಬ ಸತಿ ಇಪ್ಪಳು ನೋಡಾ. ಆ ಸತಿಯಳಿಗೆ ಒಂದು ಶಿಶು ಹುಟ್ಟಿ, ಐವರ ಸಂಗವ ಮಾಡುತಿರ್ಪುದು ನೋಡಾ. ಆ ಐವರ ಒಂದು ಇರುವೆ ನುಂಗಿತ್ತು ನೋಡಾ. ಆ ಶಿಶುವು ಹೆತ್ತ ತಾಯ ನುಂಗಿ, ತಂದೆಯೊಡನೆ ಇರ್ದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.