Index   ವಚನ - 322    Search  
 
ಆಧಾರಚಕ್ರದಲ್ಲಿ ಬ್ರಹ್ಮಜ್ಯೋತಿ, ಸ್ವಾಧಿಷ್ಠಚಕ್ರದಲ್ಲಿ ವಿಷ್ಣುಜ್ಯೋತಿ, ಮಣಿಪೂರಕ ಚಕ್ರದಲ್ಲಿ ರುದ್ರಜ್ಯೋತಿ, ಅನಾಹತಚಕ್ರದಲ್ಲಿ ಈಶ್ವರಜ್ಯೋತಿ, ವಿಶುದ್ಧಿಚಕ್ರದಲ್ಲಿ ಸದಾಶಿವಜ್ಯೋತಿ, ಆಜ್ಞೇಯಚಕ್ರದಲ್ಲಿ ಪರಶಿವಜ್ಯೋತಿ, ಬ್ರಹ್ಮರಂಧ್ರಚಕ್ರದಲ್ಲಿ ಮಹಾಜ್ಞಾನಜ್ಯೋತಿ, ಶಿಖಾಚಕ್ರದಲ್ಲಿ ಸ್ವಯಜ್ಞಾನಜ್ಯೋತಿ, ಪಶ್ಚಿಮಚಕ್ರದಲ್ಲಿ ನಿರಂಜನಜ್ಯೋತಿ, ಅಣುಚಕ್ರದಲ್ಲಿ ಪರಬ್ರಹ್ಮಜ್ಯೋತಿ. ಇಂತು ದಶಚಕ್ರಂಗಳನರಿತು ನಿಶ್ಚಿಂತ ನಿರಾಳನಾಗಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.