Index   ವಚನ - 332    Search  
 
ಬಯಲೆ ಅಂಗವಾದ ಶರಣಂಗೆ, ನಿರ್ವಯಲೇ ಲಿಂಗ ನೋಡಾ. ಆ ಲಿಂಗಕ್ಕೆ ಒಂಬತ್ತು ಬಾಗಿಲ ಶಿವಾಲಯವಿಪ್ಪುದು ನೋಡಾ. ಆ ಶಿವಾಲಯದೊಳಗೊಬ್ಬ ಸತಿಯಳು ನಿಂದು, ಐವರ ಕೂಡಿಕೊಂಡು, ಆ ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.