Index   ವಚನ - 334    Search  
 
ನಾದಘೋಷವೆಂಬ ಲಿಂಗದಲ್ಲಿ ಪಾತ್ರ ಸತ್ಪಾತ್ರವನರಿತು, ಆ ಲಿಂಗದಲ್ಲಿ ಕೂಡಿ ಪರಿಪೂರ್ಣವಾದ ಶರಣಂಗೆ, ಇಹಲೋಕವೆಂದಡೇನಯ್ಯ? ಪರಲೋಕವೆಂದಡೇನಯ್ಯ? ಇಹಪರವನೊಳಕೊಂಡು ತಾನು ತಾನಾದಲ್ಲಿಗೆ ಶೂನ್ಯವಳಿದು ನಿಃಶೂನ್ಯ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.