Index   ವಚನ - 343    Search  
 
ಆದಿಯ ಲಿಂಗವು, ಆರು ಕಂಬದ ಶಿವಾಲಯವ ಪೊಕ್ಕು ನೋಡಲು, ಆ ಶಿವಾಲಯದೊಳಗೊಂದು ಶಿಶು ಇಪ್ಪುದು ನೋಡಾ. ಆ ಶಿಶುವು ಮೂರು ಮಂಟಪವನೇರಿ ಆದಿಯ ಲಿಂಗವ ಕೂಡಿದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.