Index   ವಚನ - 350    Search  
 
ಕಾಯದ ಕರಣಂಗಳಿಗೆ ಸಿಲ್ಕಿ ನಾನಾ ದೇವ ದಾನವ ಮಾನವರಳಿದರು ನೋಡಾ. ನಾನು ನೀನೆಂಬ ಉಭಯಕ್ಕೆ ಸಿಲ್ಕದೆ ಬಯಲಿಂಗೆ ಬಯಲು ನಿರ್ವಯಲು ಕೂಡಿ ನಿಶ್ಚಿಂತನಾಗಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ.