ಮಾತುಮಥನಗಳಿಲ್ಲದೆ, ಜಾತಿಸೂತಕವಿಲ್ಲದೆ,
ಶಿವಾತ್ಮಜ್ಞಾನದಿಂದ ಪಂಚಮುಖವನರಿತು
ಪರಬ್ರಹ್ಮಲಿಂಗವನಾಚರಿಸಿ, ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mātumathanagaḷillade, jātisūtakavillade,
śivātmajñānadinda pan̄camukhavanaritu
parabrahmaliṅgavanācarisi, nirbharitanāgirda nōḍā
jhēṅkāra nijaliṅgaprabhuve.