Index   ವಚನ - 366    Search  
 
ಮೂರು ಮಂಟಪದ ಶಿವಾಲಯದ ಶಿಖರದ ಮೇಲೆ ಅಘಟಿತಲಿಂಗವಿರ್ಪುದು ನೋಡಾ. ಆ ಲಿಂಗದ ಹೃದಯಕಮಲದಲ್ಲಿ ಆರು ಮೂರ್ತಿಗಳಿಪ್ಪರುನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಯರು ಆರಾರು ಲಿಂಗಾರ್ಚನೆಯ ಮಾಡುತಿರ್ಪರು ನೋಡಾ. ಏಕೋಮನೋಹರನೆಂಬ ಪೂಜಾರಿಯು, ನಿಶ್ಚಿಂತ ನಿರಾಕುಳದ ಮೇಲೆ ನಿಂದು ಅಘಟಿತಲಿಂಗಕ್ಕೆ ಮಹಾಜ್ಞಾನವೆಂಬ ಪೂಜೆಯ ಕಟ್ಟಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.