Index   ವಚನ - 385    Search  
 
ತಂದೆ ಸತ್ತ ಮೇಲೆ ಆ ಲಿಂಗವ ತೆಗೆದು ತಾನೇ ತನ್ನ ಕೈಯಲ್ಲಿ ಕಟ್ಟಿಕೊಂಡು ಶಿವಭಕ್ತರೆಂದು ಈ ಮರ್ತ್ಯದಲ್ಲಿ ನಡೆದಾಡುವರು ನೋಡಾ. ಅವರಿಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕ ಪ್ರಸಾದವಿಲ್ಲ. ಇದು ಕಾರಣ, ಅವರು ಪಿತೃಲಿಂಗಸಂಸ್ಕಾರಿಗಳು ನೋಡಾ. ಇಂತಪ್ಪ ನರಕಜೀವಿಗಳ ಮುಖವ ನೋಡಲಾಗದು ಝೇಂಕಾರ ನಿಜಲಿಂಗಪ್ರಭುವೆ.